ಬೈರಾಗಿ 2022 ರ ಭಾರತೀಯ ಕನ್ನಡ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ವಿಜಯ್ ಮಿಲ್ಟನ್ ನಿರ್ದೇಶಿಸಿದ್ದಾರೆ (ಅದು ಅವರ ಕನ್ನಡ ಚೊಚ್ಚಲ ಚಿತ್ರ ) ಮತ್ತು ಕೃಷ್ಣ ಸಾರ್ಥಕ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಶಿವರಾಜ್ ಕುಮಾರ್, ಅಂಜಲಿ, ಧನಂಜಯ್ ಮತ್ತು ಪೃಥ್ವಿ ಅಂಬರ ನಟಿಸಿದ್ದಾರೆ . ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಇದು ನಿರ್ದೇಶಕರ ಸ್ವಂತ ತಮಿಳಿನ ಕಡುಗು ಚಿತ್ರದ ರೀಮೇಕ್. == ಕಥಾವಸ್ತು == ಹುಲಿ ಶಿವಪ್ಪನು ಮಾಜಿ ಹುಲಿವೇಷ ಕಲಾವಿದ, ಸಾಮಾನ್ಯ ಜೀವನ ನಡೆಸುತ್ತ, ಇನ್ಸ್‌ಪೆಕ್ಟರ್ ಪ್ರಕಾಶ್ ಸಾರಂಗ್ ಅವರ ಬಳಿ ಕೆಲಸ ಮಾಡುತ್ತಿರುತ್ತಾನೆ. ಅವನು ವಾತಾಪಿ ಮತ್ತು ಮಾಜಿ ಬಾಕ್ಸರ್ ಮತ್ತು ಹಳ್ಳಿಯ ನಾಯಕ ಕರ್ಣನೊಂದಿಗೆ ಸ್ನೇಹ ಬೆಳೆಸುತ್ತಾನೆ. ಕರ್ಣ ಒಬ್ಬ ಶಾಸಕನನ್ನು ಉದ್ಘಾಟನೆಗೆ ಆಹ್ವಾನಿಸಿದಾಗ, ಶಾಸಕ ಕೀರ್ತಿ ಎಂಬ ಮಗುವಿಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಾನೆ. ಕರ್ಣ ರಾಜಕೀಯ ಮಹತ್ವಾಕಾಂಕ್ಷೆಯೊಂದಿಗೆ ಶಾಸಕರಿಂದ ಲಂಚ ಪಡೆಯುತ್ತಾನೆ, ಸಮಸ್ಯೆಯ ಬಗ್ಗೆ ಮೌನವಾಗಿರುತ್ತಾನೆ. ಈ ಘಟನೆಯ ಬಗ್ಗೆ ತಿಳಿದ ಶಿವಪ್ಪ ಕರ್ಣ ಮತ್ತು ಶಾಸಕರ ವಿರುದ್ಧ ತಿರುಗಿ ಬೀಳುತ್ತಾರೆ. ಶಿವಪ್ಪ ಕೀರ್ತಿಗೆ ಹೇಗೆ ನ್ಯಾಯ ಒದಗಿಸುತ್ತಾನೆ ಎಂಬುದು ಕಥಾವಸ್ತುವಿನ ತಿರುಳು. == ಪಾತ್ರವರ್ಗ == ಹುಲಿ ಶಿವಪ್ಪನಾಗಿ ಶಿವರಾಜ್‌ಕುಮಾರ್ ಅಂಜಲಿ ಮೂಕ ಶಿಕ್ಷಕಿ ಬಾಕ್ಸರ್ ಕರ್ಣನಾಗಿ ಧನಂಜಯ್ ವಾತಾಪಿಯಾಗಿ ಪೃಥ್ವಿ ಅಂಬಾರ್ ಶೋಬಿನಾ ಪಾತ್ರದಲ್ಲಿ ಯಶ ಶಿವಕುಮಾರ್ ಇನ್ಸ್ ಪೆಕ್ಟರ್ ಪ್ರಕಾಶ್ ಸಾರಂಗ್ ಪಾತ್ರದಲ್ಲಿ ಶಶಿಕುಮಾರ್ ಶರತ್ ಲೋಹಿತಾಸ್ವ ಸಚಿವನಾಗಿ ವಿನೋದ್ ಆಳ್ವ ಇನ್ಸ್‌ಪೆಕ್ಟರ್ ಆಗಿ ಕೀರ್ತಿಯಾಗಿ ಬೇಬಿ ಸಪ್ತ ಪೂರ್ವಿ ಕೀರ್ತಿ ತಾಯಿಯಾಗಿ ಯಮುನಾ ಶ್ರೀನಿಧಿ ಕರ್ಣನ ತಾಯಿಯಾಗಿ ಕಲ್ಪನಾ ನಾಗನಾಥ್ ಅನು ಪ್ರಭಾಕರ್ ಜಾನಪದ ನೃತ್ಯಗಾರ್ತಿಯಾಗಿ (ವಿಸ್ತೃತ ಅತಿಥಿ ಪಾತ್ರ) ಹಾಡಿನಲ್ಲಿ ಚಿಕ್ಕಣ್ಣ ವಿಶೇಷ ಪಾತ್ರ. == ಬಿಡುಗಡೆ == ಚಿತ್ರವು 1 ಜುಲೈ 2022 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಬೈರಾಗಿ @ ಐ ಎಮ್ ಡಿ ಬಿ